ಗಜಲ್

ಗಜಲ್ ಸಿದ್ಧರಾಮ ಕೂಡ್ಲಿಗಿ ಎದೆಯೊಳಗೆ ನೂರು ಮುಳ್ಳುಗಳಿದ್ದರು ಮೊಗದಲ್ಲಿ ನಗೆಹೂ ಸುರಿದವಳು ನೀನಲ್ಲವೆ ಮನದೊಳಗೆ ನೂರು ಕಂಬನಿಗಳಿದ್ದರೂ ಕಣ್ಣಲ್ಲಿ ಬೆಳದಿಂಗಳ ಚೆಲ್ಲಿದವಳು ನೀನಲ್ಲವೆ ಏನೊಂದನೂ ಬಯಸದೆ ಬಂಡೆಗಲ್ಲಿನಲೂ ಬದುಕುವ ಛಲ ಹೊತ್ತು ಹಬ್ಬುತ್ತ ನಡೆದೆ ನಿಂತ ನೆಲದೊಳಗೆ ಬೇರಿಳಿಸುತ್ತಲೇ ಬೆಳಕಿನ ಪಥದಲ್ಲಿ ಹೆಜ್ಜೆ ಊರಿದವಳು ನೀನಲ್ಲವೆ ಸಾಗರದಷ್ಟು ಪ್ರೀತಿಯಿದ್ದರೂ ಭೋರ್ಗರೆಯುವುದನೇ ಮರೆತು ಹೊಯ್ದಾಡುತಲಿದ್ದೆ ಮುತ್ತು ರತ್ನ ಹವಳಗಳ ಒಡಲಲಿ ಹೊತ್ತು ಜಲಧಿಯ ಮುಸುಕ ಹೊದ್ದವಳು ನೀನಲ್ಲವೆ ಸುಂದರತೆ ಎಂಬುದೂ ಸೋತು ನಿನ್ನೆದುರು ಮಂಡಿಯೂರಿ ತನ್ನಸ್ತಿತ್ವಕೇ ನರಳಾಡಿತು ಆಗಸದಷ್ಟು … Continue reading ಗಜಲ್